
ಕೆಆರ್‌ಎಸ್, ಕಬಿನಿ, ಆಲಮಟ್ಟಿ ಮತ್ತು ಬಸವಸಾಗರ ಸೇರಿದಂತೆ ರಾಜ್ಯದ ಪ್ರಮುಖ ಜಲಾಶಯಗಳು ಭರ್ತಿಯ ಹಂತ ತಲುಪಿದ್ದು, ಒಳಹರಿವು ಹೆಚ್ಚಾಗಿದೆ.
ಕೆಆರ್‌ಎಸ್ ಜಲಾಶಯದ ಮಟ್ಟ 108.26 ಅಡಿ ತಲುಪಿದ್ದು, ಕಾವೇರಿ ನೀರು ಹಂಚಿಕೆ ನಿಯಮದಂತೆ ಬಿಳಿಗುಂಡ್ಲು ಮೂಲಕ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ.
ಲಿಂಗನಮಕ್ಕಿ ಜಲಾಶಯದಲ್ಲಿ ಇಂದು 0.30 ಅಡಿ ಏರಿಕೆಯಾಗಿದ್ದು, ಪ್ರಸ್ತುತ 1,796.50 ಅಡಿ ಮಟ್ಟದಲ್ಲಿ ಶೇ. 57.70ರಷ್ಟು ನೀರು ಸಂಗ್ರಹವಾಗಿದೆ.