
ಕರ್ನಾಟಕ ಸರ್ಕಾರವು ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಿಗಾಗಿ ವಾರ್ಷಿಕ ಆದಾಯ ಮಿತಿಯನ್ನು ಹಿಂದಿನ ₹32,000 ದಿಂದ ₹1,20,000 ಕ್ಕೆ ಏರಿಕೆ ಮಾಡಿ ಆದೇಶ ಹೊರಡಿಸಿದೆ.
ಈ ಹಿಂದೆ ಆದಾಯ ಮಿತಿ ಮೀರಿದ ಕಾರಣಕ್ಕೆ 23,14,544 ಫಲಾನುಭವಿಗಳನ್ನು ಸಂದೇಹಾಸ್ಪದ ಎಂದು ಗುರುತಿಸಿ, ಅದರಲ್ಲಿ 18,06,032 ಮಂದಿಯ ಪಿಂಚಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಈಗ ಹೊಸ ಆದೇಶದಂತೆ, ₹32,000 ಕ್ಕಿಂತ ಹೆಚ್ಚು ಮತ್ತು ₹1,20,000 ಕ್ಕಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ ಅರ್ಹ ಫಲಾನುಭವಿಗಳ ಪಿಂಚಣಿಯನ್ನು ಮುಂದುವರಿಸಲು ಕಂದಾಯ ಇಲಾಖೆ ಸೂಚಿಸಿದೆ.