
ಬಿಗ್ಬಾಸ್ 10ನೇ ಆವೃತ್ತಿಯ ಸ್ಪರ್ಧಿ ಈಶಾನಿ ನಟಿಸಿ, ಸಾಹಿತ್ಯ ಬರೆದು ಧ್ವನಿ ನೀಡಿರುವ 'ಟಾಕ್ಸಿಕ್ ಎಂಪೈರ್' ಆಲ್ಬಂನ ಮೊದಲ ಹಾಡು ಬಿಡುಗಡೆಯಾಗಿದೆ.
ಗಿರೀಗೌಡ ನಿರ್ದೇಶನದ ಈ ಆಲ್ಬಂ ಅನ್ನು ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಲ್ಲಿ ಚಿತ್ರೀಕರಿಸಲಾಗಿದ್ದು, ವಯಸ್ಕರನ್ನು ದೃಷ್ಟಿಯಲ್ಲಿಟ್ಟುಕೊಂಡು ರಚಿಸಲಾಗಿದೆ ಎಂದು ಈಶಾನಿ ತಿಳಿಸಿದ್ದಾರೆ.
ಎ.ಎಸ್. ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಆಲ್ಬಂಗೆ ಸಂತು ಮಾಸ್ಟರ್ ನೃತ್ಯ ಸಂಯೋಜನೆ ಮತ್ತು ಕೀರ್ತನ ಪೂಜಾರಿ ಛಾಯಾಚಿತ್ರಗ್ರಹಣವಿದೆ.