
ಸಿಂಗಾಪುರದಲ್ಲಿ 71 ವರ್ಷದ ಯಾಂಗ್ ಎಂಬ ವೃದ್ಧ ಫೇಸ್‌ಬುಕ್‌ನಲ್ಲಿ ಲಾಟರಿ ಜಾಹೀರಾತನ್ನು ನಂಬಿ ತನ್ನ ನಿವೃತ್ತಿ ಉಳಿತಾಯದ 21,688 ಸಿಂಗಾಪುರ್ ಡಾಲರ್ (ಅಂದಾಜು 13.5 ಲಕ್ಷ ರೂ.) ಕಳೆದುಕೊಂಡಿದ್ದಾರೆ.
ಆಗಸ್ಟ್ ಕೊನೆಯಲ್ಲಿ ಫೇಸ್‌ಬುಕ್‌ನಲ್ಲಿ ಜಾಹೀರಾತು ನೋಡಿದ ವೃದ್ಧರಿಗೆ ಸೆಪ್ಟೆಂಬರ್ ಆರಂಭದಲ್ಲಿ ಕರೆ ಮಾಡಿದ ವಂಚಕರು, 1.9 ಕೋಟಿ ರೂ. ಲಾಟರಿ ಬಹುಮಾನದ ಸುಳ್ಳು ಭರವಸೆ ನೀಡಿ ಹಣ ವಸೂಲಿ ಮಾಡಿದ್ದಾರೆ.
ಸಂಪೂರ್ಣ ಹಣ ಕಳೆದುಕೊಂಡು ನಿರುದ್ಯೋಗಿಯಾಗಿರುವ ವೃದ್ಧ ಪ್ರಸ್ತುತ ಬ್ರೆಡ್ ಮತ್ತು ಇನ್‌ಸ್ಟಂಟ್ ನೂಡಲ್ಸ್ ತಿಂದು ಬದುಕುವ ಪರಿಸ್ಥಿತಿ ತಲುಪಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.