
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು ನೈಋತ್ಯ ರೈಲ್ವೆಯು ಅಕ್ಟೋಬರ್ 16ರಿಂದ 22ರವರೆಗೆ ಬೆಂಗಳೂರು, ಮೈಸೂರು ಹಾಗೂ ಚಾಮರಾಜನಗರ ನಡುವೆ ವಿಶೇಷ ರೈಲುಗಳನ್ನು ಓಡಿಸುತ್ತಿದೆ.
KSR ಬೆಂಗಳೂರು-ಅಶೋಕಪುರಂ ನಡುವಿನ ವಿಶೇಷ ರೈಲುಗಳು ಅಕ್ಟೋಬರ್ 19, 20 ಮತ್ತು 21ರಂದು ಸಂಚರಿಸಲಿದ್ದು, ಕೆಂಗೇರಿ, ರಾಮನಗರ, ಮಂಡ್ಯ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿವೆ.
ಬೆಂಗಳೂರು-ಮೈಸೂರು ನಡುವೆ ರಾತ್ರಿ ಹಾಗೂ ಮುಂಜಾನೆ ಸಂಚರಿಸುವ ವಿಶೇಷ ರೈಲುಗಳು ಅನಾರಕ್ಷಿತ (Unreserved) ಸೇವೆಯಾಗಿರುವುದರಿಂದ ಸಾರ್ವಜನಿಕರಿಗೆ ಹೆಚ್ಚುವರಿ ಪ್ರಯಾಣದ ಆಯ್ಕೆ ಲಭ್ಯವಾಗಲಿದೆ.