
ಕೆಪಿಎಸ್ಸಿ ಪಶುವೈದ್ಯಾಧಿಕಾರಿ ನೇಮಕಾತಿಯಲ್ಲಿ 400 ಹುದ್ದೆಗಳ ಅಕ್ರಮ ನಡೆಸಿದ ಆರೋಪದ ಮೇಲೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಮತ್ತು ಮಧ್ಯವರ್ತಿ ಬಸವರಾಜ್ ಕನ್ನಾಳೆಯನ್ನು ಸಿಐಡಿ ಬಂಧಿಸಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ, ಒಎಂಆರ್ ಶೀಟ್ ತಿದ್ದುಪಡಿ ಮತ್ತು ಸಂದರ್ಶನದಲ್ಲಿ ಅಂಕಗಳ ಬದಲಾವಣೆ ಮೂಲಕ ಮೂರು ಹಂತಗಳಲ್ಲಿ ಈ ಅಕ್ರಮ ಜಾಲವನ್ನು ಆರೋಪಿಗಳು ನಡೆಸುತ್ತಿದ್ದರು.
ಬಸವರಾಜ್ ಕನ್ನಾಳೆ ಮನೆಯಲ್ಲಿ 2025ರ ಬಿ ಗ್ರೂಪ್ ಪರೀಕ್ಷೆಯ 6 ಹಾಲ್ ಟಿಕೆಟ್ಗಳು ಪತ್ತೆಯಾಗಿದ್ದು, ಈ ಅಕ್ರಮದ ಜಾಲ ಮತ್ತಷ್ಟು ವಿಸ್ತರಿಸಿರುವ ಶಂಕೆ ವ್ಯಕ್ತವಾಗಿದೆ.