
ಚಿಂತಾಮಣಿ ತಾಲ್ಲೂಕಿನಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಹಿಂದೆಂದೂ ಕಾಣದಂತಹ 32 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದ್ದು, ಇದು ಸಾಮಾನ್ಯಕ್ಕಿಂತ 3-4 ಡಿಗ್ರಿ ಅಧಿಕವಾಗಿದೆ.
ಮಳೆಯ ಕೊರತೆ ಮತ್ತು ಎಲ್ ನಿನೊ ಪರಿಣಾಮದಿಂದಾಗಿ ಈ ವರ್ಷದ ಜೂನ್ 1ರಿಂದ ಸೆಪ್ಟೆಂಬರ್ 8ರವರೆಗೆ ವಾಡಿಕೆಯ 28.22 ಸೆಂ.ಮೀ ಬದಲು ಕೇವಲ 9.78 ಸೆಂ.ಮೀ ಮಳೆ ಸುರಿದಿದೆ.
ಬರಗಾಲದಿಂದ ಕಂಗೆಟ್ಟಿರುವ ರೈತರು ಬಿತ್ತನೆ ಮಾಡಿದ್ದ ನೆಲಗಡಲೆ, ತೊಗರಿ ಮತ್ತು ರಾಗಿ ಬೆಳೆಗಳು ರಣಬಿಸಿಲಿಗೆ ಬಾಡುತ್ತಿದ್ದು, ತಾಲ್ಲೂಕಿನಲ್ಲಿ ಬರದ ತೀವ್ರತೆ ಹೆಚ್ಚಾಗಿದೆ.