
ಬೆಂಗಳೂರಿನ ಹೆಬ್ಬಾಳ ಮತ್ತು ಮೆಖ್ರಿ ಸರ್ಕಲ್ ನಡುವಿನ ಯುಎಎಸ್ ಸ್ಟಾಫ್ ಕ್ವಾಟ್ರಸ್‌ನಿಂದ ಮೆಖ್ರಿ ಸರ್ಕಲ್ ವರೆಗೆ ಬಳ್ಳಾರಿ ರಸ್ತೆಯಲ್ಲಿ ನಾಲ್ಕು ಪಥದ ಎಲಿವೇಟೆಡ್ ಕಾರಿಡಾರ್ ಕಾಮಗಾರಿ ಆರಂಭಗೊಂಡಿದೆ.
ನವೆಂಬರ್ 6ರಿಂದ ಆರಂಭವಾಗಿರುವ ಈ ಬೃಹತ್ ನಿರ್ಮಾಣ ಕಾಮಗಾರಿಯು ಮುಂದಿನ 18 ತಿಂಗಳ ಕಾಲ ಮುಂದುವರಿಯಲಿದ್ದು, ವಾಹನ ಸವಾರರಿಗೆ ಸಂಚಾರ ದಟ್ಟಣೆ ಸಮಸ್ಯೆ ಎದುರಾಗಲಿದೆ.
ಕಾಮಗಾರಿ ಹಿನ್ನೆಲೆಯಲ್ಲಿ ಬಸ್ ಹಾಗೂ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದ್ದು, ಕಾರು ಮತ್ತು ದ್ವಿಚಕ್ರ ವಾಹನಗಳಂತಹ ಲಘು ವಾಹನಗಳಿಗೆ ಮಾತ್ರ ಪರ್ಯಾಯ ಮಾರ್ಗಗಳಲ್ಲಿ ಅನುಮತಿ ನೀಡಲಾಗಿದೆ.