
ಧಾರವಾಡ ಸೇರಿದಂತೆ ಹಲವೆಡೆ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಕೆಲ ಮಕ್ಕಳಿಗೆ ಅರ್ಧವಾರ್ಷಿಕ ಪರೀಕ್ಷೆ ಹತ್ತಿರ ಬರುತ್ತಿದ್ದರೂ ಹೊಸ ಪಠ್ಯಪುಸ್ತಕಗಳು ಸಿಕ್ಕಿಲ್ಲ.
ಮೂರು, ನಾಲ್ಕು, ಆರು, ಎಂಟು ಮತ್ತು ಒಂಬತ್ತನೇ ತರಗತಿಯ ಕೆಲವು ವಿದ್ಯಾರ್ಥಿಗಳಿಗೆ ಸಮಾಜ ವಿಜ್ಞಾನ ಹಾಗೂ ದೈಹಿಕ ಶಿಕ್ಷಣದ ಪುಸ್ತಕಗಳ ಕೊರತೆಯಿದೆ.
ಕಳೆದ ವರ್ಷದ ದಾಖಲಾತಿ ಆಧಾರದ ಮೇಲೆ ಪುಸ್ತಕಗಳನ್ನು ವಿತರಿಸಿರುವುದರಿಂದ ಹೊಸದಾಗಿ ಪ್ರವೇಶ ಪಡೆದ ಮಕ್ಕಳಿಗೆ ಸಮಸ್ಯೆಯಾಗಿದೆ.