
ಶ್ರಾವಣ ಮಾಸದ ಬೇಡಿಕೆ ಮತ್ತು ಇಳುವರಿ ಕುಸಿತದಿಂದಾಗಿ ರಾಜ್ಯದ ಮಾರುಕಟ್ಟೆಯಲ್ಲಿ ಒಣ ಕೊಬ್ಬರಿಯ ಬೆಲೆ ಕ್ವಿಂಟಾಲ್‌ಗೆ 40,000 ರೂಪಾಯಿ ತಲುಪಿದೆ.
ತುಮಕೂರು, ಹಾಸನ, ಮಂಡ್ಯ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹವಾಮಾನ ವೈಪರೀತ್ಯದಿಂದ ತೆಂಗಿನ ಇಳುವರಿ ಕಡಿಮೆಯಾಗಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಕೊಬ್ಬರಿ ಬೆಲೆ 400 ರೂಪಾಯಿ ಆಸುಪಾಸಿನಲ್ಲಿದ್ದು, ಗ್ರಾಹಕರು ಖರೀದಿಗೆ ಪರದಾಡುವಂತಾಗಿದೆ.