ಪ್ರೀಮಿಯಂ ತಡವಾಗಿ ಪಾವತಿಸಿದ ಕಾರಣಕ್ಕೆ ಆರೋಗ್ಯ ವಿಮಾ ಕ್ಲೈಮ್ ತಿರಸ್ಕರಿಸಿದ್ದ ಓರಿಯಂಟಲ್ ಇನ್ಶೂರೆನ್ಸ್ ಕಂಪನಿಗೆ ರಾಮನಗರ ಗ್ರಾಹಕರ ಆಯೋಗ ದಂಡ ವಿಧಿಸಿದೆ.
ದೂರುದಾರ ಶ್ರೀನಿವಾಸ್ ಅವರ ಪತ್ನಿಯ ಶಸ್ತ್ರಚಿಕಿತ್ಸೆಯ 33,000 ರೂ. ವೆಚ್ಚವನ್ನು 30 ದಿನದೊಳಗೆ ಪಾವತಿಸುವಂತೆ ಹಾಗೂ ಶೇ. 6 ಬಡ್ಡಿ ನೀಡುವಂತೆ ಆಯೋಗ ಆದೇಶಿಸಿದೆ.
ಕೋವಿಡ್ನಂತಹ ವಿಪತ್ತಿನ ಸಮಯದಲ್ಲಿ ಸಣ್ಣ ಕಾರಣಗಳಿಗಾಗಿ ಕ್ಲೈಮ್ ತಿರಸ್ಕರಿಸುವುದು ಸೇವೆಯಲ್ಲಿನ ಕೊರತೆ ಎಂದು ಆಯೋಗವು ವಿಮಾ ಕಂಪನಿಗೆ ಎಚ್ಚರಿಕೆ ನೀಡಿದೆ.