
ಗುಜರಾತ್‌ನ ಖೇಡಾ ಜಿಲ್ಲೆಯಲ್ಲಿ ಗರ್ಭಿಣಿ ಅರುಣಾಬೆನ್ ಸೋಧಾ ಅವರ ಸಾವು ಆತ್ಮಹತ್ಯೆಯಲ್ಲ ಬದಲಾಗಿ ಪತಿ ಹಾಗೂ ಕುಟುಂಬಸ್ಥರಿಂದ ನಡೆದ ಭೀಕರ ಕೊಲೆ ಎಂಬುದು ತನಿಖೆಯಿಂದ ಬಯಲಾಗಿದೆ.
ಪತ್ನಿ ಹೊಟ್ಟೆನೋವಿನಿಂದ ಬಳಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದಾಗ, ಪತಿ ಮಿತುಲ್ ಗೂಗಲ್‌ನಲ್ಲಿ ಜೈಲು ಶಿಕ್ಷೆಯ ಬಗ್ಗೆ ಹುಡುಕಾಟ ನಡೆಸಿ ಬಳಿಕ ಕೊಲೆಗೆ ಸಂಚು ರೂಪಿಸಿದ್ದಾನೆ.
ಆರೋಪಿಗಳು ಬಾಯಿಗೆ ವಿಷಕಾರಿ ರಾಸಾಯನಿಕವನ್ನು ಬಲವಂತವಾಗಿ ಹಾಕಿ ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ಶವವನ್ನು ನೇತುಹಾಕಿದ್ದು, ಪತಿ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.