
ಐಐಟಿ ಹೈದರಾಬಾದ್ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳು ಹಾಗೂ ವೃತ್ತಿಪರರಿಗಾಗಿ ಹೊಸ ಪ್ರಮಾಣೀಕರಣ ಕಾರ್ಯಕ್ರಮವನ್ನು ಘೋಷಿಸಿದೆ.
ಈ ಹೈಬ್ರಿಡ್ ಮೋಡ್ ಕೋರ್ಸ್ 2026ರ ಅಕ್ಟೋಬರ್ 24 ರಿಂದ ನವೆಂಬರ್ 14 ರವರೆಗೆ ನಾಲ್ಕು ವಾರಗಳ ಕಾಲ ನಡೆಯಲಿದ್ದು, ಎಐ ಏಜೆಂಟ್‌ಗಳು ಮತ್ತು ಆರ್‌ಎಜಿ (RAG) ಕುರಿತು ತರಬೇತಿ ನೀಡಲಾಗುತ್ತದೆ.
ಮೊದಲ 20 ಅರ್ಜಿದಾರರಿಗೆ 45,000 ರೂ. ಹಾಗೂ ನಂತರದವರಿಗೆ 50,000 ರೂ. ಶುಲ್ಕ ನಿಗದಿಪಡಿಸಲಾಗಿದ್ದು, ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.