
ಹೂವಿನಹಡಗಲಿ ತಾಲ್ಲೂಕಿನ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಪೂರೈಕೆಯಾಗಿರುವ ಶೂ ಮತ್ತು ಸಾಕ್ಸ್ಸ್ಗಳು ತೀರಾ ಕಳಪೆ ಗುಣಮಟ್ಟದಿಂದ ಕೂಡಿವೆ.
ವಿದ್ಯಾವಿಕಾಸ ಯೋಜನೆ ಅಡಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ 19,400 ಯೂನಿಟ್ ಶೂ ಪೂರೈಕೆಯಾಗಿದ್ದು, ಕಳಪೆ ಕಾರಣಕ್ಕೆ ಶಾಸಕ ಕೃಷ್ಣನಾಯ್ಕ ವಿತರಣೆಗೆ ತಡೆದಿದ್ದಾರೆ.
ಕಳಪೆ ಶೂ ಪೂರೈಕೆ ಬಗ್ಗೆ ಲೋಕಾಯುಕ್ತರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಸದನದಲ್ಲಿ ಸರ್ಕಾರದ ಗಮನ ಸೆಳೆಯುವುದಾಗಿ ಶಾಸಕರು ತಿಳಿಸಿದ್ದಾರೆ.