
ಶಿವಮೊಗ್ಗದ ತುಂಗಾ ನದಿಗೆ ತಾಯಿ ಭವಾನಿ ತನ್ನ ಮೂವರು ಮಕ್ಕಳೊಂದಿಗೆ ಹಾರಿದ್ದು, ಸ್ಥಳೀಯರ ಸಹಾಯದಿಂದ ತಾಯಿ ಮತ್ತು 11 ತಿಂಗಳ ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚಿತ್ರದುರ್ಗದ ಹೊಸೂರು ಗ್ರಾಮದ ಭವಾನಿ ಪತಿಯೊಂದಿಗಿನ ಜಗಳದಿಂದ ಮನನೊಂದು 6 ಮತ್ತು 4 ವರ್ಷದ ಹೆಣ್ಣು ಮಕ್ಕಳನ್ನು ನದಿಗೆ ಎಸೆದು ತಾನೂ ಹಾರಿದ್ದಾಳೆ.
ನದಿಪಾಲಾದ ಇಬ್ಬರು ಹೆಣ್ಣು ಮಕ್ಕಳಿಗಾಗಿ ಅಗ್ನಿಶಾಮಕ ದಳ ಮತ್ತು ಸ್ಥಳೀಯರು 15 ರಿಂದ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ಬೋಟ್ಗಳ ಮೂಲಕ ತೀವ್ರ ಶೋಧ ನಡೆಸುತ್ತಿದ್ದಾರೆ.