
ಅಮರ್ ಕೌಶಿಕ್ ನಿರ್ದೇಶನದ 'ಮಹಾವತಾರ್' ಪೌರಾಣಿಕ ಚಿತ್ರದಲ್ಲಿ ಪರಶುರಾಮನ ಪಾತ್ರ ನಿರ್ವಹಿಸಲು ನಟ ವಿಕ್ಕಿ ಕೌಶಲ್ ಅವರು ತಮ್ಮ ದೇಹದ ತೂಕವನ್ನು 25 ಕೆಜಿಗೂ ಹೆಚ್ಚು ಹೆಚ್ಚಿಸಿಕೊಳ್ಳುತ್ತಿದ್ದಾರೆ.
ಸೆಪ್ಟೆಂಬರ್‌ನಿಂದ ಕಠಿಣ ತರಬೇತಿ ಆರಂಭವಾಗಲಿದ್ದು, ಡಿಸೆಂಬರ್‌ನಲ್ಲಿ ಚಿತ್ರೀಕರಣಕ್ಕೆ ಮುನ್ನ ಅವರು ವಿಶೇಷ ಡಯಟ್ ಮತ್ತು ವ್ಯಾಯಾಮದ ಮೂಲಕ ಬಲಿಷ್ಠ ದೇಹವನ್ನು ಪಡೆಯಲಿದ್ದಾರೆ.
ಈ ಪಾತ್ರಕ್ಕಾಗಿ ವಿಕ್ಕಿ ಕೌಶಲ್ ದಿನನಿತ್ಯದ ಆಹಾರದಲ್ಲಿ 250 ರಿಂದ 500 ಹೆಚ್ಚುವರಿ ಕ್ಯಾಲೊರಿಗಳನ್ನು ಸೇವಿಸಲಿದ್ದು, ಪ್ರೊಟೀನ್ ಮತ್ತು ಧಾನ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.