
ಮಲೆ ಮಹದೇಶ್ವರ ಬೆಟ್ಟದ ದೇವಸ್ಥಾನದ ಹುಂಡಿಯಲ್ಲಿ ಜೂನ್ 17 ರಿಂದ ಜುಲೈ 27 ರವರೆಗಿನ 41 ದಿನಗಳ ಅವಧಿಯಲ್ಲಿ 3.37 ಕೋಟಿ ರೂಪಾಯಿಗೂ ಅಧಿಕ ನಗದು ಸಂಗ್ರಹವಾಗಿದೆ.
ನಗದು ಕಾಣಿಕೆಯ ಜೊತೆಗೆ ಭಕ್ತರು 58 ಗ್ರಾಂ ಚಿನ್ನ ಮತ್ತು 1 ಕೆ.ಜಿ 250 ಗ್ರಾಂ ಬೆಳ್ಳಿ ಆಭರಣಗಳನ್ನು ದೇವರಿಗೆ ಸಮರ್ಪಿಸಿದ್ದಾರೆ.
ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿ ನೇತೃತ್ವದಲ್ಲಿ ನಡೆದ ಈ ಹುಂಡಿ ಎಣಿಕೆ ಕಾರ್ಯವು ಪಾರದರ್ಶಕವಾಗಿ ನಡೆದಿದ್ದು, ಸಂಗ್ರಹವಾದ ಹಣವನ್ನು ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುವುದು.