
ಬಿಗ್ ಬಾಸ್ ಮನೆಯಲ್ಲಿ ಕೆಲವು ದಿನಗಳಿಂದ ಪರಸ್ಪರ ದೂರವಾಗಿದ್ದ ಸೌಂದರ್ಯಾ ಹಾಗೂ ಯಶಸ್ ನಡುವೆ ಮನಸ್ತಾಪ ಮುಗಿದು ಮತ್ತೆ ರಾಜಿಯಾಗಿದೆ.
ಯಶಸ್ ಅವರು ಮಹಿಳಾ ಸ್ಪರ್ಧಿಗಳ ಜೊತೆ ಹೆಚ್ಚು ಬೆರೆಯುತ್ತಿರುವುದು ಹಾಗೂ ಫ್ಲರ್ಟ್ ಮಾಡುತ್ತಿರುವುದೇ ಅವರ ದೂರಾಗಲು ಕಾರಣವಾಗಿತ್ತು.
ಅಕ್ಟೋಬರ್ 7ರ ಎಪಿಸೋಡ್‌ನಲ್ಲಿ ಯಶಸ್ ವಿರುದ್ಧ 'ಸ್ತ್ರೀ ವ್ಯಾಮೋಹಿ' ಪದ ಬಳಕೆಯಾದಾಗ ಅಳುತ್ತಿದ್ದ ಯಶಸ್ ಅವರನ್ನು ಸೌಂದರ್ಯಾ ತೆರಳಿ ಸಮಾಧಾನಪಡಿಸಿ ಅಪ್ಪಿಕೊಂಡಿದ್ದಾರೆ.