
ಆಗಸ್ಟ್ 4 ರಂದು ಫುಕೆಟ್ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದ ಕ್ಯಾಪ್ಟನ್ ಗಾಂಜಾ ಸೇವಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ, ಸಂಸ್ಥೆಯು ತನ್ನ ಎಲ್ಲಾ ಪೈಲಟ್ಗಳಿಗೆ ಆಗಸ್ಟ್ 13 ರಿಂದ ಕಡ್ಡಾಯ ಮಾದಕ ದ್ರವ್ಯ ಪರೀಕ್ಷೆ ನಡೆಸಲು ನಿರ್ಧರಿಸಿದೆ.
ಫುಕೆಟ್-ದೆಹಲಿ ವಿಮಾನವು ಹಾರಾಟದ ಮಧ್ಯೆ 300 ಅಡಿ ಕೆಳಕ್ಕೆ ಕುಸಿದು 14 ಜನರಿಗೆ ಗಾಯವಾಗಿದ್ದು, ತಪ್ಪಿತಸ್ಥ ಕ್ಯಾಪ್ಟನ್ ಲೈಸೆನ್ಸ್ ರದ್ದುಗೊಳಿಸಿ ಅಮಾನತು ಮಾಡಲಾಗಿದೆ.
ವಿಮಾನಯಾನ ನಿಯಮಗಳ ಪ್ರಕಾರ ಪ್ರತಿ ವರ್ಷ ಕನಿಷ್ಠ ಶೇ. 10 ರಷ್ಟು ಸಿಬ್ಬಂದಿಗೆ ಸೈಕೋಆಕ್ಟಿವ್ ಮಾದಕದ್ರವ್ಯ ಪರೀಕ್ಷೆ ಕಡ್ಡಾಯವಾಗಿದ್ದು, ಪ್ರಸ್ತುತ ಘಟನೆ ಕುರಿತು ಒಂದು ತಿಂಗಳೊಳಗೆ ಮಧ್ಯಂತರ ವರದಿ ನೀಡುವಂತೆ ತನಿಖಾ ಸಂಸ್ಥೆಗೆ ಸರ್ಕಾರ ಸೂಚಿಸಿದೆ.