
ಆಂಧ್ರಪ್ರದೇಶದ ಪೋಲವರಂ ಜಿಲ್ಲೆಯ ಗೊಲ್ಲಗುಪ್ಪ ಗ್ರಾಮದಲ್ಲಿ ಮಲೇರಿಯಾ ತಡೆಗಟ್ಟಲು ವಿತರಿಸಿದ ಕ್ಲೋರೋಕ್ವಿನ್ ಮಾತ್ರೆ ಸೇವಿಸಿದ 7 ವರ್ಷದ ಬಾಲಕಿ ಮಡಿವಿ ಜಮುನಾ ಮೃತಪಟ್ಟಿದ್ದಾಳೆ.
ಆರೋಗ್ಯ ಇಲಾಖೆ ವಿತರಿಸಿದ ಮಾತ್ರೆಗಳನ್ನು ಸೇವಿಸಿದ 71 ಮಂದಿಯಲ್ಲಿ 52ಕ್ಕೂ ಹೆಚ್ಚು ಗ್ರಾಮಸ್ಥರು ವಾಂತಿ ಮತ್ತು ತಲೆತಿರುಗುವಿಕೆಯಿಂದ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಉನ್ನತ ಮಟ್ಟದ ವೈದ್ಯಕೀಯ ತನಿಖೆಗೆ ಆದೇಶಿಸಿದ್ದು, ಔಷಧದ ಮಾದರಿಗಳನ್ನು ಲ್ಯಾಬ್ ಪರೀಕ್ಷೆಗೆ ಕಳುಹಿಸಲಾಗಿದೆ.