
ಕೇಂದ್ರದ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಹಾಗೂ ವಿವಿಧ ಸಂಸ್ಥೆಗಳು ಜಂಟಿಯಾಗಿ ನಡೆಸಿದ 'ಆಪರೇಷನ್ ಟ್ರೈಡೆಂಟ್' ಕಾರ್ಯಾಚರಣೆಯಲ್ಲಿ ಅಸ್ಸಾಂ, ಮಿಜೋರಾಂ ಮತ್ತು ಮಣಿಪುರದ 38 ಸ್ಥಳಗಳಲ್ಲಿ ದಾಳಿ ನಡೆಸಿ 18 ಆರೋಪಿಗಳನ್ನು ಬಂಧಿಸಲಾಗಿದೆ.
ತನಿಖೆ ವೇಳೆ ಸುಮಾರು ₹100 ಕೋಟಿ ಮೌಲ್ಯದ ಹವಾಲಾ ವ್ಯವಹಾರಗಳು ಬೆಳಕಿಗೆ ಬಂದಿದ್ದು, 1,424 ಬ್ಯಾಂಕ್ ಖಾತೆಗಳನ್ನು ನಿರ್ಬಂಧಿಸಿ ₹17.82 ಕೋಟಿ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಮ್ಯಾನ್ಮಾರ್ನಿಂದ ಈಶಾನ್ಯ ರಾಜ್ಯಗಳ ಮೂಲಕ ಹೆರಾಹಿನ್ ಮತ್ತು ಮೆಥಾಂಫೆಟಮಿನ್ ಕಳ್ಳಸಾಗಣೆ ಮಾಡುತ್ತಿದ್ದ ಪ್ರಮುಖ ಜಾಲವನ್ನು ಈ ಕಾರ್ಯಾಚರಣೆಯ ಮೂಲಕ ಮಟ್ಟಹಾಕಲಾಗಿದೆ.