
ವೈದ್ಯಕೀಯ ಕ್ಷೇತ್ರದಲ್ಲಿ ಆರೋಗ್ಯ ಮತ್ತು ಕ್ಷೇಮದ ಕುರಿತು ಮುಕ್ತ ವಾತಾವರಣ ರೂಪಿಸಲು ಭಾರತ ಮತ್ತು ಯುಕೆಯ ಆರು ಪ್ರಮುಖ ಮಾನಸಿಕ ಆರೋಗ್ಯ ಹಾಗೂ ವೈದ್ಯಕೀಯ ಸಂಸ್ಥೆಗಳು ಕೈಜೋಡಿಸಿವೆ.
ಅಧ್ಯಯನಗಳ ಪ್ರಕಾರ ಭಾರತದಲ್ಲಿ ಪ್ರತಿ ಇಬ್ಬರು ಎಂಬಿಬಿಎಸ್ ವಿದ್ಯಾರ್ಥಿಗಳಲ್ಲಿ ಒಬ್ಬರು ಖಿನ್ನತೆಯ ಲಕ್ಷಣ ಎದುರಿಸುತ್ತಿದ್ದು, ಶೇ. 30.1 ರಷ್ಟು ವೈದ್ಯರಲ್ಲಿ ಖಿನ್ನತೆ ಕಂಡುಬಂದಿದೆ.
ಈ ಅಭಿಯಾನದಡಿ ದೇಶವ್ಯಾಪಿ ಸಮೀಕ್ಷೆ, ರಾಷ್ಟ್ರೀಯ ವೆಬಿನಾರ್ ಸರಣಿ ಹಾಗೂ ಜೂನ್ 2027ರಲ್ಲಿ ಮಧುರೈನಲ್ಲಿ ನೇರ ಕಾರ್ಯಾಗಾರ ನಡೆಸಲು ನಿರ್ಧರಿಸಲಾಗಿದೆ.