
ದೆಹಲಿಯಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯ ಔತಣಕೂಟದ ಮೆನುವಿನಲ್ಲಿ ಕರ್ನಾಟಕದ ಸಾಂಪ್ರದಾಯಿಕ 'ಬೇಳೆ ಸಾರು' ಸ್ಥಾನ ಪಡೆದು ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದೆ.
ರಷ್ಯಾ, ಚೀನಾ, ಇರಾನ್ ಮತ್ತು ದುಬೈ ಸೇರಿದಂತೆ ವಿವಿಧ ದೇಶಗಳ ಜಾಗತಿಕ ನಾಯಕರು ಭಾಗವಹಿಸಿದ್ದ ಈ ಶೃಂಗಸಭೆಯಲ್ಲಿ ದಕ್ಷಿಣ ಭಾರತದ ಈ ಖಾದ್ಯ ಗಮನ ಸೆಳೆದಿದೆ.
ಇದು ದಕ್ಷಿಣ ಭಾರತದ ಭಾಷೆ ಹಾಗೂ ಆಹಾರ ಸಂಸ್ಕೃತಿಗಳು ಒಂದಕ್ಕೊಂದು ಬೆರೆತು ಬೆಳೆದಿರುವುದಕ್ಕೆ ನಿದರ್ಶನವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.