
ಬೆಂಗಳೂರಿನಲ್ಲಿ ಕುಡಿಯುವ ನೀರನ್ನು ವಾಹನ ತೊಳೆಯಲು ಮತ್ತು ಕಟ್ಟಡ ನಿರ್ಮಾಣಕ್ಕೆ ಬಳಸಿದ 692 ಮಂದಿಗೆ ಜಲಮಂಡಳಿ ಒಟ್ಟು 34.60 ಲಕ್ಷ ರೂ. ದಂಡ ವಿಧಿಸಿದೆ.
ದಕ್ಷಿಣ ವಲಯದಲ್ಲಿ ಅತಿ ಹೆಚ್ಚು ಅಂದರೆ 206 ಮಂದಿ ನಿಯಮ ಉಲ್ಲಂಘಿಸಿದ್ದು, ತಲಾ 5 ಸಾವಿರ ರೂ. ದಂಡವನ್ನು ವಸೂಲಿ ಮಾಡಲಾಗಿದೆ.
ಕಾವೇರಿ ನೀರು ಸರಬರಾಜು ಯೋಜನೆ-5ನೇ ಹಂತದ ಕಾಮಗಾರಿಯಿಂದಾಗಿ ಜುಲೈ 31ರಂದು ಬೆಳಿಗ್ಗೆ 6ರಿಂದ ರಾತ್ರಿ 9ರವರೆಗೆ ನಗರದ ಹಲವೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.