
ದೇಶದ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ಬಂಡವಾಳ ಒದಗಿಸುವ ನಿಟ್ಟಿನಲ್ಲಿ 10,000 ಕೋಟಿ ರೂ. ವೆಚ್ಚದ 'ಎಸ್‌ಎಂಇ ಗ್ರೋತ್ ಫಂಡ್' ಸ್ಥಾಪನೆಗೆ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಈ ನಿಧಿಯ ಬಹುಪಾಲು ಅನುದಾನವನ್ನು ತಯಾರಿಕಾ ವಲಯದ ಎಸ್‌ಎಂಇಗಳಿಗೆ ಮೀಸಲಿಡಲಾಗಿದ್ದು, ಶ್ರೇಣಿ-2 ಹಾಗೂ ಶ್ರೇಣಿ-3 ನಗರಗಳ ಕೈಗಾರಿಕಾ ಕ್ಲಸ್ಟರ್‌ಗಳಲ್ಲಿರುವ ಉದ್ಯಮಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
ಆಲ್ಟರ್ನೇಟಿವ್ ಇನ್ವೆಸ್ಟ್‌ಮೆಂಟ್ ಫಂಡ್ ಚೌಕಟ್ಟಿನಡಿ ಜಾರಿಯಾಗುವ ಈ ಯೋಜನೆಯು ಉದ್ಯಮಗಳ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಹಾಗೂ 'ವಿಕಸಿತ ಭಾರತ 2047' ಗುರಿ ಸಾಧನೆಗೆ ನೆರವಾಗಲಿದೆ.