
ಆರೋಗ್ಯ ಸಚಿವ ಯು.ಟಿ ಖಾದರ್ ಘೋಷಣೆಯಂತೆ, ಶಾಲೆ ಮತ್ತು ಪಿಯು ಕಾಲೇಜುಗಳ 50 ಮೀಟರ್ ಸುತ್ತಳತೆಯಲ್ಲಿ ಜಂಕ್ ಫುಡ್ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಹೈ ಫ್ಯಾಟ್, ಹೈ ಶುಗರ್ ಮತ್ತು ಹೈ ಸಾಲ್ಟ್ ಅಂಶಗಳಿರುವ ಆಹಾರ ಉತ್ಪನ್ನಗಳ ಮಾರಾಟವನ್ನು ಶೈಕ್ಷಣಿಕ ಸಂಸ್ಥೆಗಳ ಕ್ಯಾಂಟೀನ್ಗಳಲ್ಲೂ ನಿಷೇಧಿಸಲಾಗಿದೆ.
ನಿಯಮ ಉಲ್ಲಂಘಿಸುವ ಅಂಗಡಿಗಳ ಪರವಾನಗಿ ರದ್ದುಗೊಳಿಸುವುದಲ್ಲದೆ, ಭಾರೀ ದಂಡ ವಿಧಿಸಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.