
ನವದೆಹಲಿಯಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿ ಬೀಜಿಂಗ್ಗೆ ಮರಳಿದ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರ ಆರೋಗ್ಯದಲ್ಲಿ ಹಠಾತ್ ಏರುಪೇರಾಗಿದ್ದು, ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಿಮಾನ ನಿಲ್ದಾಣಕ್ಕೆ ಬಂದಿಳಿದ ತಕ್ಷಣ ಯಾವುದೇ ಅಧಿಕೃತ ಸ್ವಾಗತವಿಲ್ಲದೆ ಅವರನ್ನು ಸೇನಾ ಹೆಲಿಕಾಪ್ಟರ್ ಮೂಲಕ ರಾಜಧಾನಿಯ ಪ್ರಸಿದ್ಧ 301 ಮಿಲಿಟರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಚೀನೀ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ತಿಳಿಸಿದ್ದಾರೆ.
ಭಾರತ ಭೇಟಿ ವೇಳೆ ಅನಾರೋಗ್ಯಕ್ಕೊಳಗಾದ ಕಾರಣ ಅವರು ನಿಗದಿತ ಸಮಯಕ್ಕಿಂತ ಮೊದಲೇ ತಮ್ಮ ಭೇಟಿಯನ್ನು ಮೊಟಕುಗೊಳಿಸಿದ್ದರು ಹಾಗೂ ಪ್ರಧಾನಿ ಮೋದಿ ನೀಡಿದ್ದ ಅಧಿಕೃತ ಭೋಜನಕೂಟಕ್ಕೂ ಗೈರಾಗಿದ್ದರು ಎಂದು ವರದಿಯಾಗಿದೆ.