
ರಾಜ್ಯ ಸರ್ಕಾರವು ನಿವೃತ್ತ ಸರ್ಕಾರಿ ನೌಕರರಿಗಾಗಿ ಸಂಧ್ಯಾ ಕಿರಣ ಯೋಜನೆಯನ್ನು ಜಾರಿಗೆ ತಂದಿದ್ದು, ಅರ್ಹ ಪಿಂಚಣಿದಾರರು ಮತ್ತು ಕುಟುಂಬ ಸದಸ್ಯರಿಗೆ ವರ್ಷಕ್ಕೆ ₹5 ಲಕ್ಷದವರೆಗೆ ನಗದುರಹಿತ ಚಿಕಿತ್ಸೆ ಸಿಗಲಿದೆ.
ಈ ಯೋಜನೆಯ ಒಟ್ಟು ವೆಚ್ಚದಲ್ಲಿ ಶೇ 70ರಷ್ಟು ವಂತಿಕೆಯನ್ನು ಪಿಂಚಣಿದಾರರು ಮತ್ತು ಶೇ 30ರಷ್ಟು ಪಾಲನ್ನು ಸರ್ಕಾರ ಭರಿಸಲಿದ್ದು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಅನುಷ್ಠಾನಗೊಳ್ಳಲಿದೆ.
70 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪಿಂಚಣಿದಾರರು, ಪತಿ/ಪತ್ನಿ ಮತ್ತು ಅವಲಂಬಿತ ದಿವ್ಯಾಂಗ ಮಕ್ಕಳು ಇದರ ಫಲಾನುಭವಿಗಳಾಗಿದ್ದು, ಈಗಾಗಲೇ ನಿವೃತ್ತರಾದವರು 3 ತಿಂಗಳೊಳಗೆ ನೋಂದಾಯಿಸಿಕೊಳ್ಳಬೇಕು.