
2018ರ ಕೇಪ್ಟೌನ್ ಟೆಸ್ಟ್ನಲ್ಲಿ ನಡೆದ 'ಸ್ಯಾಂಡ್ಪೇಪರ್ ಗೇಟ್' ಹಗರಣದಲ್ಲಿ ಕೇವಲ ಮೂವರಲ್ಲದೆ ಇಡೀ ಆಸ್ಟ್ರೇಲಿಯಾ ತಂಡ ಹಾಗೂ ಕೋಚಿಂಗ್ ಸಿಬ್ಬಂದಿ ಭಾಗಿಯಾಗಿದ್ದರು ಎಂದು ಮಾಜಿ ಓಪನರ್ ಉಸ್ಮಾನ್ ಖ್ವಾಜಾ ತಮ್ಮ ಆತ್ಮಕಥೆಯಲ್ಲಿ ಬಹಿರಂಗಪಡಿಸಿದ್ದಾರೆ.
ಬ್ರಾಡ್ಕಾಸ್ಟ್ ಕ್ಯಾಮೆರಾಗಳ ಕಣ್ಣಿಗೆ ಬೀಳದಂತೆ ಮೈದಾನದ ಮಧ್ಯಭಾಗದ ಬದಲಿಗೆ ಬೌಂಡರಿ ಲೈನ್ಗಳ ಬಳಿ ಸ್ಯಾಂಡ್ಪೇಪರ್ ಬಳಸಲು ತಂಡವು ವ್ಯವಸ್ಥಿತ ಮಾಸ್ಟರ್ ಪ್ಲ್ಯಾನ್ ರೂಪಿಸಿತ್ತು ಎಂದು ಅವರು ತಿಳಿಸಿದ್ದಾರೆ.
ಈ ಹಗರಣ ಹೊರಬಂದಾಗ ಕ್ರಿಕೆಟ್ ಆಸ್ಟ್ರೇಲಿಯಾ ತನಿಖೆಯಲ್ಲಿ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಕ್ಯಾಮರೋನ್ ಬ್ಯಾನ್ಕ್ರಾಫ್ಟ್ ಅವರಿಗೆ ಮಾತ್ರ ನಿಷೇಧ ಹೇರಲಾಗಿತ್ತು.