
ಕೇವಲ 3 ಅಡಿ ಎತ್ತರ ಮತ್ತು 20 ಕೆ.ಜಿ ತೂಕವಿರುವ ಗುಜರಾತ್ನ ಗಣೇಶ್ ಬರೈಯಾ, ಸುಪ್ರೀಂ ಕೋರ್ಟ್ ಹೋರಾಟದ ನಂತರ ಎಂಬಿಬಿಎಸ್ ಪೂರೈಸಿ ವೈದ್ಯರಾಗಿ ಅಧಿಕೃತವಾಗಿ ಕಾರ್ಯಾರಂಭ ಮಾಡಿದ್ದಾರೆ.
2018ರಲ್ಲಿ ನೀಟ್ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 233ನೇ ರ್ಯಾಂಕ್ ಪಡೆದಿದ್ದರೂ, ದೈಹಿಕ ನ್ಯೂನತೆಯ ಕಾರಣ ನೀಡಿ ವೈದ್ಯಕೀಯ ಮಂಡಳಿ ಪ್ರವೇಶ ನಿರಾಕರಿಸಿತ್ತು.
ನವೆಂಬರ್ 27, 2025ರಂದು ಭಾವನಗರದ ಸರ್ ತಖ್ತಾಸಿನ್ಹಜಿ ಜನರಲ್ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ಗಣೇಶ್ ಬರೈಯಾ ತಮ್ಮ ಮೊದಲ ಹುದ್ದೆಯನ್ನು ಅಲಂಕರಿಸಿದ್ದಾರೆ.