
2025ರ ಮೇ 7-8ರಂದು ನಡೆದ 'ಆಪರೇಷನ್ ಸಿಂಧೂರ್' ವೇಳೆ ಭಾರತದ S-400 ವಾಯು ರಕ್ಷಣಾ ವ್ಯವಸ್ಥೆಯ ಬಲದಿಂದ ಪಾಕಿಸ್ತಾನಿ ವಿಮಾನಗಳು ಗಡಿಯ 200 ಕಿ.ಮೀ ವ್ಯಾಪ್ತಿಗೆ ಬರಲು ಸಾಧ್ಯವಾಗಲಿಲ್ಲ.
ಭಾರತದಲ್ಲಿ S-400 ಕ್ಷಿಪಣಿ ವ್ಯವಸ್ಥೆ ಎಲ್ಲಿದೆ ಎಂದು ಪತ್ತೆಹಚ್ಚಲು ಪಾಕಿಸ್ತಾನ ತನ್ನ ಸ್ಲೀಪರ್ ಸೆಲ್‌ಗಳನ್ನು ಸಕ್ರಿಯಗೊಳಿಸಿತ್ತು ಎಂದು ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ ಬಹಿರಂಗಪಡಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಭಾರತವು 314 ಕಿಲೋಮೀಟರ್ ದೂರದಲ್ಲಿದ್ದ ಪಾಕಿಸ್ತಾನದ ವಿಮಾನವನ್ನು ಹೊಡೆದುರುಳಿಸಿದ್ದು, ಇದು ವಿಶ್ವದ ಅತ್ಯಂತ ದೀರ್ಘ ಅಂತರದ ಯಶಸ್ವಿ ವೈಮಾನಿಕ ದಾಳಿಯಾಗಿದೆ.