
ಶೇರ್-ಎ-ಪಂಜಾಬ್ ಟಿ20 ಲೀಗ್ನಲ್ಲಿ ಅಮೃತಸರ್ ಸೂರ್ಮಾಸ್ ತಂಡದ ನಾಯಕ ನಮನ್ ಧೀರ್, ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ.
ಒಟ್ಟು 64 ಎಸೆತಗಳಲ್ಲಿ 16 ಬೌಂಡರಿ ಮತ್ತು 12 ಸಿಕ್ಸರ್ಗಳೊಂದಿಗೆ 173 ರನ್ ಗಳಿಸಿದ ಧೀರ್, ಭಾರತೀಯ ಟಿ20 ಲೀಗ್ ಇತಿಹಾಸದಲ್ಲೇ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದ್ದಾರೆ.
ಧೀರ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಸೂರ್ಮಾಸ್ ತಂಡ 279 ರನ್ ಗಳಿಸಿ, ಮೊಹಾಲಿ ಕಿಂಗ್ಸ್ ವಿರುದ್ಧ 67 ರನ್ಗಳ ಭರ್ಜರಿ ಜಯ ಸಾಧಿಸಿದೆ.