
ನಟ ಕಿಚ್ಚ ಸುದೀಪ್ ಅವರು ಚಲನಚಿತ್ರರಂಗದಲ್ಲಿ ಯಶಸ್ವಿ 30 ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ 'ಜೀ ಕನ್ನಡ ಕುಟುಂಬ ಅವಾರ್ಡ್ಸ್-2026' ವೇದಿಕೆಯಲ್ಲಿ ಅವರಿಗೆ ವಿಶೇಷ ಗೌರವಾರ್ಪಣೆ ಮಾಡಲಾಗಿದೆ.
ಈ ಕಾರ್ಯಕ್ರಮದಲ್ಲಿ ಸುದೀಪ್ ಅವರ ಮೂರು ದಶಕಗಳ ಸಿನಿಮಾ ಪ್ರಯಾಣವನ್ನು ನೆನೆಯುತ್ತಾ ನೀಡಿದ ಸಂಗೀತ ನಮನಕ್ಕೆ ನಟ ಭಾವುಕರಾದರು.
ಅಭಿಮಾನಿಗಳು ಹಾಗೂ ವಿಶೇಷ ಚೇತನ ಮಕ್ಕಳು ನೀಡಿರುವ ಪ್ರಶಸ್ತಿಗೆ ಧನ್ಯವಾದ ತಿಳಿಸಿದ ಸುದೀಪ್, ನಿರೂಪಕಿಯ ಕೋರಿಕೆಯ ಮೇರೆಗೆ ಮಧುರ ಹಾಡೊಂದನ್ನು ಹಾಡಿ ಸಭೆಯನ್ನು ರಂಜಿಸಿದರು.