
ಅಮಿತಾಭ್ ಬಚ್ಚನ್ ನಿರೂಪಣೆಯ 'ಕೌನ್ ಬನೇಗಾ ಕರೋಡ್ಪತಿ 18' ಶೋನಲ್ಲಿ ಮಹಾರಾಷ್ಟ್ರದ ಸಾಂಗ್ಲಿ ಮೂಲದ ಉದ್ಯಮಿ ಸಲೀಂ ಮೇಸ್ತ್ರಿ 25 ಲಕ್ಷ ರೂಪಾಯಿ ಗೆದ್ದಿದ್ದಾರೆ.
ಪತ್ನಿಯ ಗಂಭೀರ ಅನಾರೋಗ್ಯದ ಚಿಕಿತ್ಸಾ ವೆಚ್ಚಕ್ಕಾಗಿ ಸ್ವಂತ ಮನೆಯನ್ನು ಮಾರಾಟ ಮಾಡಿದ್ದ ಅವರು ತೀವ್ರ ಸಾಲದ ಸುಳಿಯಲ್ಲಿದ್ದರು.
ಅಮೆರಿಕದ ಗಾಯಕ ಬಾಬ್ ಡಿಲನ್ ಆಲ್ಬಮ್ ಮುಖಪುಟದಲ್ಲಿದ್ದ ಭಾರತೀಯ ಗಾಯಕ ಯಾರು ಎಂಬ 14ನೇ ಪ್ರಶ್ನೆಗೆ ಉತ್ತರ ಖಚಿತವಿಲ್ಲದೆ ಅವರು 50 ಲಕ್ಷ ಹಂತದಲ್ಲಿ ಆಟದಿಂದ ಹೊರನಡೆದರು.