
ಅಮೆರಿಕದ ಮ್ಯಾಸಚೂಸೆಟ್ಸ್ನ ಕೇಪ್ ಕಾಡ್ ಸಂರಕ್ಷಿತ ಪ್ರದೇಶದಲ್ಲಿ ಕೇವಲ 5.2 ಗ್ರಾಂ ತೂಕವಿರುವ ಎರಡು ತಲೆಗಳ ಅಪರೂಪದ ಆಮೆ ಮರಿಯೊಂದು ಪತ್ತೆಯಾಗಿದೆ.
ಭ್ರೂಣದ ಬೆಳವಣಿಗೆಯ ವೇಳೆ ಸಂಪೂರ್ಣವಾಗಿ ಬೇರ್ಪಡದ ಬೈಸೆಫಲಿ ಎಂಬ ಅಸಹಜತೆಯಿಂದ ಈ ವಿಚಿತ್ರ ದೈಹಿಕ ರಚನೆ ರೂಪುಗೊಂಡಿದೆ ಎಂದು ತಜ್ಞರು ತಿಳಿಸಿದ್ದಾರೆ.
ಪ್ರಸ್ತುತ ಈ ಅಪರೂಪದ ಮರಿಯು ಕೇಪ್ ವೈಲ್ಡ್ಲೈಫ್ ಸೆಂಟರ್ನ ಪಶುವೈದ್ಯರ ಆರೈಕೆಯಲ್ಲಿದ್ದು, ಇದರ ಆರೋಗ್ಯ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.