ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್ವೆಲ್ತ್ ಗೇಮ್ಸ್ನ ಪುರುಷರ 100 ಮೀಟರ್ T47 ಪ್ಯಾರಾ-ಅಥ್ಲೆಟಿಕ್ಸ್ ವಿಭಾಗದಲ್ಲಿ ದಿಲೀಪ್ ಗಾವಿತ್ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.
22 ವರ್ಷದ ದಿಲೀಪ್ ಗಾವಿತ್ 10.71 ಸೆಕೆಂಡುಗಳಲ್ಲಿ ಗುರಿ ತಲುಪಿ ಗೇಮ್ಸ್ ರೆಕಾರ್ಡ್ ನಿರ್ಮಿಸಿದರೆ, ಇದೇ ಸ್ಪರ್ಧೆಯಲ್ಲಿ ಮೊಹಮ್ಮದ್ ಬಾಸಿಲ್ 10.83 ಸೆಕೆಂಡುಗಳಲ್ಲಿ ಬೆಳ್ಳಿ ಪದಕ ಪಡೆದರು.
ಬಾಲ್ಯದಲ್ಲಿ ಅಪಘಾತದಿಂದ ಒಂದು ಕೈ ಕಳೆದುಕೊಂಡಿದ್ದ ದಿಲೀಪ್, ಈ ಸಾಧನೆಯನ್ನು ತನ್ನ ತರಬೇತುದಾರ ವೈಜನಾಥ್ ದಯಾನಂದ್ ಕಾಳೆ ಅವರಿಗೆ ಗುರುಪೂರ್ಣಿಮೆಯ ಕಾಣಿಕೆಯಾಗಿ ಅರ್ಪಿಸಿದ್ದಾರೆ.