
ಕರ್ನಾಟಕ ಕೃಷಿ ಇಲಾಖೆಯ 945 ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಸರ್ಕಾರ ರದ್ದುಗೊಳಿಸಿದೆ.
ಆಗಸ್ಟ್ 8 ಮತ್ತು 9ರಂದು ನಡೆಯಬೇಕಿದ್ದ ಲಿಖಿತ ಪರೀಕ್ಷೆಯನ್ನು ಕೃಷಿ ಆಯುಕ್ತರ ನಿರ್ದೇಶನದ ಮೇರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ರದ್ದುಪಡಿಸಿದೆ.
ರದ್ದಾದ ಹುದ್ದೆಗಳಲ್ಲಿ 128 ಕೃಷಿ ಅಧಿಕಾರಿ ಮತ್ತು 817 ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳು ಸೇರಿವೆ ಎಂದು ಕೆಇಎ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.