
ಹಿಮಾಚಲ ಪ್ರದೇಶದ 33 ವರ್ಷದ ಯುವತಿ ತರಾನಾ ಚೌಹಾಣ್ ಅವರು ವರ್ಷಕ್ಕೆ 24 ಲಕ್ಷ ರೂಪಾಯಿ ಆದಾಯ ತರುತ್ತಿದ್ದ ಕಾರ್ಪೊರೇಟ್ ಉದ್ಯೋಗಕ್ಕೆ ವಿದಾಯ ಹೇಳಿದ್ದಾರೆ.
ಹಿಮಾಚಲದ ರೋಹ್ರು ಎಂಬಲ್ಲಿ ತಮ್ಮ ಶತಮಾನದಷ್ಟು ಹಳೆಯ ಪೂರ್ವಜರ ಮನೆಯನ್ನು ನವೀಕರಿಸಿ 'ನಿರ್ವಾಣ ಹೋಂಸ್ಟೇ' ಆಗಿ ಪರಿವರ್ತಿಸಿ ಯಶಸ್ವಿಯಾಗಿ ಉದ್ಯಮ ಆರಂಭಿಸಿದ್ದಾರೆ.
ಪ್ರಸ್ತುತ ತನ್ನ ಆದಾಯ ನಿಗದಿತವಾಗಿಲ್ಲದಿದ್ದರೂ, ಈ ಸವಾಲಿನಲ್ಲಿ ತನಗೆ ನೆಮ್ಮದಿಯಿದೆ ಎಂದು ತಿಳಿಸಿರುವ ಅವರು, ಪರ್ಯಾಯ ಯೋಜನೆ ಇಲ್ಲದೆ ದಿಢೀರ್ ಕೆಲಸ ಬಿಡಬಾರದು ಎಂದು ಯುವಕರಿಗೆ ಕಿವಿಮಾತು ಹೇಳಿದ್ದಾರೆ.