
ಹೈದರಾಬಾದ್ನ ವ್ಯಕ್ತಿಯೊಬ್ಬರು ರೆಸ್ಟೋರೆಂಟ್ ಬಿಲ್ ಅನ್ನು ಆನ್ಲೈನ್ ಫುಡ್ ಡೆಲಿವರಿ ಆಪ್ ಸ್ವಿಗ್ಗಿ ಜೊತೆ ಹೋಲಿಕೆ ಮಾಡಿದ್ದು, ಬೆಲೆಯಲ್ಲಿ ದೊಡ್ಡ ವ್ಯತ್ಯಾಸವಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೈದರಾಬಾದ್ ರೆಸ್ಟೋರೆಂಟ್ನಲ್ಲಿ ಜಿಎಸ್ಟಿ ಸೇರಿ 230 ರೂಪಾಯಿಗೆ ಸಿಗುವ ಊಟವು, ಯಾವುದೇ ರಿಯಾಯಿತಿ ಕೂಪನ್ ಅನ್ವಯಿಸದ ಮೊದಲು ಸ್ವಿಗ್ಗಿಯಲ್ಲಿ 436 ರೂಪಾಯಿ ತೋರಿಸಿದೆ.
ಆನ್ಲೈನ್ ಆರ್ಡರ್ನಲ್ಲಿ ಸೇವಾ ಶುಲ್ಕ ಹಾಗೂ ಬೆಲೆಗಳ ವ್ಯತ್ಯಾಸದಿಂದಾಗಿ ಗ್ರಾಹಕರಿಗೆ ಸುಮಾರು 200 ರೂ.ಗಳಿಗೂ ಅಧಿಕ ಹೆಚ್ಚುವರಿ ವೆಚ್ಚವಾಗುತ್ತಿದ್ದು, ನೆಟ್ಟಿಗರಲ್ಲಿ ಪರಮವಿರೋಧ ಚರ್ಚೆಗೆ ಕಾರಣವಾಗಿದೆ.