
ಮೈಸೂರಿನಲ್ಲಿ ನಡೆಯುತ್ತಿರುವ ಸಿ.ಎಂ. ಕಪ್ ದಸರಾ ಕ್ರೀಡಾಕೂಟದ ಅಥ್ಲೆಟಿಕ್ಸ್ನಲ್ಲಿ ಪುರುಷರ 5,000 ಮೀ. ಓಟವನ್ನು 15 ನಿಮಿಷ 00.8 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ವೈಭವ್ ಪಾಟೀಲ ದಾಖಲೆ ಬರೆದಿದ್ದಾರೆ.
ಕೂಟದ ಎರಡನೇ ದಿನ ಒಟ್ಟು ಆರು ಹೊಸ ಕೂಟ ದಾಖಲೆಗಳು ನಿರ್ಮಾಣವಾಗಿದ್ದು, ಪ್ರಸನ್ನಕುಮಾರ್ ವಿ.ಎಂ. ಸ್ಪ್ರಿಂಟ್ ಡಬಲ್ ಪೂರೈಸಿದ್ದಾರೆ.
ಮಹಿಳೆಯರ 800 ಮೀ. ಓಟದಲ್ಲಿ ಪ್ರಿಯಾಂಕಾ ಎಂ. ಓಲೇಕಾರ್ ಹಾಗೂ ಲಾಂಗ್ ಜಂಪ್ನಲ್ಲಿ ಶ್ರೀದೇವಿಕಾ ವಿ.ಎಸ್. ಕೂಟ ದಾಖಲೆ ಬರೆದಿದ್ದಾರೆ.