
ಬಿಗ್ ಬಾಸ್ ಮನೆಯಲ್ಲಿ ಗಗನ್ ಹಾಗೂ ಗಾನವಿ ನಡುವಿನ ಜಗಳ ತಾರಕಕ್ಕೇರಿ ಕೈಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ತಲುಪಿದೆ.
ಟಾಸ್ಕ್ ವೇಳೆ ಗಾನವಿ ಅವರು 'ಕುನ್ನಿ' ಪದ ಬಳಕೆ ಮಾಡಿದ್ದರಿಂದ ಟ್ರಿಗರ್ ಆದ ಗಗನ್ ಮತ್ತು ಗಾನವಿ ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದುಕೊಂಡರು.
ಇಬ್ಬರೂ ವಾಗ್ವಾದದ ವೇಳೆ ಕುಟುಂಬದವರ ವಿಷಯವನ್ನು ಎಳೆದು ತಂದಿದ್ದು, ಇದು ಮನೆಯಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.