
ದುಬೈನಲ್ಲಿ ಭಾರತೀಯ ಮೂಲದ ಮಹಿಳೆಯೊಬ್ಬರು ಕಳೆದುಕೊಂಡಿದ್ದ ವ್ಯಾಲೆಟ್ ಅನ್ನು ಕ್ಯಾಬ್ ಚಾಲಕ ಎಬೆನೆಜರ್ ಅಫಿಬಿ ಪ್ರಾಮಾಣಿಕವಾಗಿ ಹಿಂದಿರುಗಿಸಿದ್ದಾರೆ.
ವ್ಯಾಲೆಟ್ನಲ್ಲಿ ಪಾಸ್ಪೋರ್ಟ್, ಕಾರ್ಡ್ಗಳು, ಹಣ ಮತ್ತು ಅಗಲಿದ ತಂದೆಯ ಫೋಟೋ ಇತ್ತು.
ಚಾಲಕ ಟಿಪ್ಸ್ ನಿರಾಕರಿಸಿ, 'ಕೈಗೆ ಸಿಕ್ಕ ವಸ್ತುಗಳನ್ನು ಹಿಂದಿರುಗಿಸುವುದು ನನ್ನ ಅಭ್ಯಾಸ' ಎಂದು ಹೇಳಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.