
ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಚರ್ಚ್ ಕಾಂಕ್ರೀಟ್ ಮೇಲ್ಛಾವಣಿ ಕುಸಿದು ಮೂವರು ಕಾರ್ಮಿಕರು ದುರ್ಮರಣಕ್ಕೀಡಾಗಿದ್ದು, 11ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ತಾತ್ಕಾಲಿಕವಾಗಿ ಹಾಕಲಾಗಿದ್ದ ಸೆಂಟರಿಂಗ್ ಕಂಬಗಳು ಶಕ್ತಿ ತಡೆಯಲಾರದೆ ಕುಸಿದಿದ್ದರಿಂದ ಈ ಅಪಘಾತ ಸಂಭವಿಸಿದೆ.
ಮೃತರನ್ನು ಬೆಂಗಳೂರಿನ ಜಾನ್ (39), ಆಂಧ್ರಪ್ರದೇಶದ ಎಮ್ಯಾನುಯೆಲ್ (45) ಮತ್ತು ಸ್ಯಾಮ್ಯುಯೆಲ್ (45) ಎಂದು ಗುರುತಿಸಲಾಗಿದೆ.