
ಮಧ್ಯಪ್ರದೇಶದಲ್ಲಿ ಪಾಮ್ ಆಯಿಲ್ ಸಾಗಿಸುತ್ತಿದ್ದ ಟ್ಯಾಂಕರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಸಾವಿರಾರು ಲೀಟರ್ ಎಣ್ಣೆ ರಸ್ತೆಯುದ್ದಕ್ಕೂ ಹರಿದಿದೆ.
ಅಪಘಾತದ ನಂತರ ಸ್ಥಳೀಯರು ಗಾಯಗೊಂಡ ಚಾಲಕನಿಗೆ ಸಹಾಯ ಮಾಡುವ ಬದಲು ಬಕೆಟ್, ಪಾತ್ರೆ ಮತ್ತು ಚೊಂಬುಗಳನ್ನು ಹಿಡಿದುಕೊಂಡು ಎಣ್ಣೆಯನ್ನು ತುಂಬಿಸಿಕೊಳ್ಳಲು ಮುಗಿಬಿದ್ದಿದ್ದಾರೆ.
ರಸ್ತೆಯಲ್ಲಿ ಹರಿಯುತ್ತಿದ್ದ ಎಣ್ಣೆಯನ್ನು ಸಾರ್ವಜನಿಕರು ಕೈಯಿಂದಲೇ ಎತ್ತಿ ತುಂಬಿಕೊಳ್ಳುತ್ತಿರುವ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.