
ಹುಮನಾಬಾದ್ ಕೈಗಾರಿಕಾ ಪ್ರದೇಶದಲ್ಲಿ ನದಿ ಮತ್ತು ಹಳ್ಳಕ್ಕೆ ರಾಸಾಯನಿಕ ತ್ಯಾಜ್ಯ ಹರಿಸುತ್ತಿದ್ದ ನಾಲ್ಕು ಕಾರ್ಖಾನೆಗಳನ್ನು ಸ್ಥಗಿತಗೊಳಿಸಲು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸೋಮವಾರ ಆದೇಶಿಸಿದ್ದಾರೆ.
6ಎಚ್ ಇಂಡಸ್ಟ್ರೀಸ್, ಸತ್ಯದೀಪ್ತ ಫಾರ್ಮಾಸುಟಿಕಲ್ಸ್ ಲಿಮಿಟೆಡ್, ಕೆಜಿಎನ್ ಇಂಡಸ್ಟ್ರೀಸ್ ಮತ್ತು ಹಿಮಾಲಯ ಸ್ಟೀಲ್ ಇಂಡಸ್ಟ್ರೀಸ್ ಕಾರ್ಖಾನೆಗಳ ಕಾರ್ಯನಿರ್ವಹಣೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸಲಾಗಿದೆ.
ಸಚಿವ ಈಶ್ವರ ಬಿ. ಖಂಡ್ರೆ ಅವರು ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನೀಡಿದ ಲಿಖಿತ ಸೂಚನೆಯ ಬೆನ್ನಲ್ಲೇ ಜಿಲ್ಲಾಡಳಿತ ಈ ಕಠಿಣ ಕ್ರಮ ಕೈಗೊಂಡಿದೆ.