
2026ರ ಆಗಸ್ಟ್ನಲ್ಲಿ ದೇಶಾದ್ಯಂತ ಒಟ್ಟು 24,23,201 ವಾಹನಗಳು ಮಾರಾಟವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ.18ರಷ್ಟು ಹೆಚ್ಚಳವಾಗಿದೆ ಎಂದು FADA ವರದಿ ಮಾಡಿದೆ.
ಪ್ರಯಾಣಿಕ ವಾಹನಗಳ ಮಾರಾಟವು ಮೊದಲ ಬಾರಿಗೆ 4 ಲಕ್ಷದ ಗಡಿ ದಾಟಿದ್ದು, ಒಟ್ಟು 4,02,398 ಕಾರುಗಳು ಮಾರಾಟವಾಗಿ ಶೇ.16.14ರಷ್ಟು ಬೆಳವಣಿಗೆ ದಾಖಲಿಸಿವೆ.
ಆಗಸ್ಟ್ನಲ್ಲಿ CNG, ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳ ಪಾಲು ಶೇ.41.95ರಷ್ಟಿದ್ದು, ಪೆಟ್ರೋಲ್ ವಾಹನಗಳ ಪಾಲನ್ನು (ಶೇ.40.85) ಹಿಂದಿಕ್ಕಿರುವುದು ಮಾರುಕಟ್ಟೆಯ ಪ್ರಮುಖ ಬದಲಾವಣೆಯಾಗಿದೆ.