
ತಮಿಳುನಾಡು ಸಿಎಂ ವಿಜಯ್ ಅವರ ಪತ್ನಿ ಸಂಗೀತಾ ಅವರು ಚೆಂಗಲ್ಪಟ್ಟು ಕುಟುಂಬ ಕಲ್ಯಾಣ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ಹಿಂತೆಗೆದುಕೊಂಡಿದ್ದು, ಪ್ರಕರಣವನ್ನು ನ್ಯಾಯಾಲಯ ಮುಕ್ತಾಯಗೊಳಿಸಿದೆ.
1999ರ ಆಗಸ್ಟ್ 25 ರಂದು ವಿವಾಹವಾಗಿದ್ದ ಈ ದಂಪತಿಗೆ ಸಂಜಯ್ ಮತ್ತು ದಿವ್ಯ ಸಶಾ ಎಂಬ ಇಬ್ಬರು ಮಕ್ಕಳಿದ್ದು, ಇತ್ತೀಚಿನ ಭಿನ್ನಾಭಿಪ್ರಾಯಗಳ ನಂತರ ದಂಪತಿ ಮತ್ತೆ ಒಂದಾಗಿದ್ದಾರೆ.
ವಿಜಯ್ ಅವರ ನಟನೆಯಿಂದ ಆಕರ್ಷಿತರಾಗಿ ಅಭಿಮಾನಿಯಾಗಿ ಬಂದ ಸಂಗೀತಾ ಅವರನ್ನು, ವಿಜಯ್ ಅವರ ತಂದೆ ಎಸ್.ಎ. ಚಂದ್ರಶೇಖರ್ ಅವರೇ ಮದುವೆ ಪ್ರಸ್ತಾವನೆ ಇಟ್ಟು ವಿವಾಹ ನಿಶ್ಚಯಿಸಿದ್ದರು.