
ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ತನ್ನ ಮೈಸೂರು ಸಂಕೀರ್ಣದಲ್ಲಿ ಅಭಿವೃದ್ಧಿಪಡಿಸಿದ ಮೊದಲ ಸ್ವದೇಶಿ ವಿನ್ಯಾಸದ 60-ಟನ್ ಎಲೆಕ್ಟ್ರಿಕ್ ಡಂಪ್ ಟ್ರಕ್ ಬಿಡುಗಡೆ ಮಾಡಿದೆ.
ಗುರುವಾರ ವರ್ಚುವಲ್ ವೇದಿಕೆಯಲ್ಲಿ ಬಿಇಎಂಎಲ್ ಸಿಎಂಡಿ ಶಾಂತನು ರಾಯ್ ಅವರು ಈ ಹೊಸ ಬಿಎಚ್60–ಇವಿ ವಾಹನವನ್ನು ಅನಾವರಣಗೊಳಿಸಿದರು.
ಗಣಿಗಾರಿಕೆ ಮತ್ತು ಮೂಲಸೌಕರ್ಯ ವಲಯಕ್ಕೆ ಅನುಕೂಲವಾಗುವ ಈ ವಿದ್ಯುತ್ ಚಾಲಿತ ವಾಹನದ ನಿರ್ವಹಣಾ ವೆಚ್ಚವು ಡೀಸೆಲ್ ವಾಹನಕ್ಕಿಂತ ಶೇ 40ರಿಂದ 60ರಷ್ಟು ಕಡಿಮೆ ಇರಲಿದೆ.