
ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಮೊಬೈಲ್ ಪೂರೈಕೆ ಮಾಡಿದ ಆರೋಪ ಎದುರಿಸುತ್ತಿರುವ ಮೂವರು ಆರೋಪಿಗಳ ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.
ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶಿವಪ್ರಸಾದ್ ಕೆ.ಬಿ. ಅವರು ನವೀನ್ ಕುಮಾರ್, ಜೈಲು ವಾರ್ಡರ್ ಪ್ರಕಾಶ್ ಮಹಾವೀರ್ ಮತ್ತು ಮಂಜುನಾಥ್ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದ್ದಾರೆ.
ಆಗಸ್ಟ್ 11ರಂದು ಸಿಸಿಬಿ ಪೊಲೀಸರು ನಡೆಸಿದ ತಪಾಸಣೆ ವೇಳೆ ಪ್ರಜ್ವಲ್ ಇದ್ದ ಸೆಲ್&zwnjನಲ್ಲಿ ಮೊಬೈಲ್, ಚಾರ್ಜರ್ ಮತ್ತು ಪೆನ್&zwnjಡ್ರೈವ್ ಪತ್ತೆಯಾಗಿದ್ದವು.