
‘ಪೂಲ್ ಔರ್ ಕಾಂಟೆ’ ಚಿತ್ರದ ಮೂಲಕ ನಟ ಅಜಯ್ ದೇವಗನ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಖ್ಯಾತ ನಿರ್ದೇಶಕ ಕುಕು ಕೋಹ್ಲಿ ಅವರು ಆಗಸ್ಟ್ 25ರ ರಾತ್ರಿ ನಿಧನರಾಗಿದ್ದಾರೆ.
77 ವರ್ಷದ ಕುಕು ಕೋಹ್ಲಿ ಅವರು ನಟಿ ಅರುಣಾ ಇರಾನಿ ಅವರ ಪತಿಯಾಗಿದ್ದು, ತಮ್ಮ ವೃತ್ತಿಜೀವನದಲ್ಲಿ ಧರ್ಮೇಂದ್ರ ಮತ್ತು ಗೋವಿಂದ ಸೇರಿದಂತೆ ಹಲವು ಸ್ಟಾರ್ ನಟರಿಗೆ ನಿರ್ದೇಶನ ಮಾಡಿದ್ದರು.
ಮುಂಬೈನಲ್ಲಿ ನಡೆದ ಅಂತಿಮ ಕಾರ್ಯದಲ್ಲಿ ರೋಹಿತ್ ಶೆಟ್ಟಿ, ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಸೇರಿದಂತೆ ಬಾಲಿವುಡ್‌ನ ಹಲವು ಗಣ್ಯರು ಭಾಗವಹಿಸಿ ಗೌರವ ಸಲ್ಲಿಸಿದರು.